ಒಂದು ಷೇರಿಗೆ ಮತ್ತೊಂದು ಷೇರು ಉಚಿತ : ಬೋನಸ್ ಷೇರು ಘೋಷಿಸಿದೆ Monarch Networth Capital Ltd
Bonus Share: ಭಾರತದ ಪ್ರಮುಖ ಹಣಕಾಸು ಸೇವಾ ಕಂಪನಿಗಳಲ್ಲಿ ಒಂದಾದ ಮೊನಾರ್ಕ್ ನೆಟ್‌ವರ್ತ್ ಕ್ಯಾಪಿಟಲ್ ಲಿಮಿಟೆಡ್ ತನ್ನ ಷೇರುದಾರರಿಗೆ ಬೋನಸ್ ಷೇರು ಘೋಷಿಸಿದೆ. ಈ ಕಂಪನಿಯಲ್ಲಿ ಷೇರು ಹೊಂದಿರುವ ಷೇರುದಾರರಿಗೆ ಪ್ರತಿ ಷೇರಿಗೆ ಮತ್ತೊಂದು ಬೋನಸ್ ಷೇರು ಸಿಗಲಿದೆ.
ಮೊನಾರ್ಕ್ ನೆಟ್‌ವರ್ತ್ ಕ್ಯಾಪಿಟಲ್ ಲಿಮಿಟೆಡ್ ತನ್ನ ಷೇರುದಾರರಿಗೆ ಬಂಪರ್ ಸುದ್ದಿ ನೀಡಿದೆ. ಪ್ರತಿ ಷೇರಿಗೆ ಮತ್ತೊಂದು ಷೇರು ಬೋನಸ್ ನೀಡುವುದಾಗಿ ಭಾನುವಾರ (ಜು.28) ಘೋಷಣೆ ಮಾಡಿದೆ.
ಮಾರ್ನಾಕ್ ನೆಟ್‌ವರ್ತ್ ಕ್ಯಾಪಿಟಲ್‌ನಲ್ಲಿ ಹೂಡಿಕೆ ಮಾಡಿರುವ ಷೇರುದಾರರು ರೆಕಾರ್ಡ್ ದಿನಾಂಕದಂದು ಪ್ರತಿ ಷೇರಿಗೆ ಮತ್ತೊಂದು ಷೇರು ಬೋನಸ್ ಪಡೆಯಲಿದ್ದಾರೆ. ಆದ್ರೆ ರೆಕಾರ್ಡ್ ದಿನಾಂಕವು ಇನ್ನೂ ಘೋಷಣೆಯಾಗಿಲ್ಲ.
ಮೊನಾರ್ಕ್ ಕಂಪನಿಯು ಇದೇ ಮೊದಲ ಬಾರಿಗೆ ಬೋನಸ್ ಷೇರುಗಳನ್ನು ತನ್ನ ಷೇರುದಾರರಿಗೆ ನೀಡುತ್ತಿದೆ. ಇಷ್ಟಲ್ಲದೆ ಕಂಪನಿಯು ಇದುವರೆಗೂ ಸ್ಟಾಕ್ ಕೂಡ ಸ್ಪ್ಲಿಟ್ ಮಾಡಿಲ್ಲ. ಆದಾಗ್ಯೂ ಕಂಪನಿಯು ಉತ್ತಮ ಡಿವಿಡೆಂಡ್ ನೀಡುತ್ತಿದೆ.
''ಬೋನಸ್ ಷೇರು ನೀಡಲು ಒಪ್ಪಿಗೆ ನೀಡಲಾಗಿದ್ದು, ಕಂಪನಿಯ ಈಕ್ವಿಟಿ ಷೇರುದಾರರು 1:1 ಅನುಪಾತದಲ್ಲಿ ಒಂದು ಹೊಸ ಷಷೇರು ಪಡೆಯಲಿದ್ದಾರೆ. ಹೊಸ ಈಕ್ವಿಟಿ ಷೇರು 10 ರೂಆಪಾಯಿ ಮುಖಬೆಲೆಯದ್ದಾಗಿದ್ದು, ರೆಕಾರ್ಡ್ ದಿನಾಂಕವನ್ನು ಷೇರುದಾರರು ಒಪ್ಪಿಗೆ ನೀಡಬೇಕಿದೆ'' ಎಂದು ಕಂಪನಿಯು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.
ಕಂಪನಿಯು ಇದಷ್ಟೇ ಅಲ್ಲದೆ ಈಕ್ವಿಟಿ ಫಂಡ್ ರೈಸ್ ಮೂಲಕ 300 ಕೋಟಿ ರೂಪಾಯಿ ಸಂಗ್ರಹಿಸಲು ಮುಂದಾಗಿದೆ. ಅದಿಕೃತ ಷೇರು ಬಂಡವಾಳವನ್ನು ಕಂಪನಿಯು ಈಗಿರುವ 65 ಕೋಟಿಯಿಂದ 100 ಕೋಟಿ ರೂಪಾಯಿಗೆ ಹೆಚ್ಚಿಸಲು ಕಂಪನಿಯ ಮಂಡಳಿ ಅನುಮೋದಿಸಿದೆ ಎಂದು ಫೈಲಿಂಗ್‌ನಲ್ಲಿ ಸೇರಿಸಲಾಗಿದೆ.
ಯಾರು ಬೋನಸ್ ಷೇರು ಪಡೆಯಲು ಅರ್ಹರು?
ಈ ಕಂಪನಿಯಲ್ಲಿ ಯಾರು ರೆಕಾರ್ಡ್ ದಿನಾಂಕಕ್ಕೂ ಮೊದಲು ಷೇರು ಖರೀದಿಸಿ ತಮ್ಮ ಡಿಮ್ಯಾಟ್ ಖಾತೆಯಲ್ಲಿ ಹಿಡಿದಿಟ್ಟುಕೊಳ್ಳುವರೋ ಅವರಿಗೆ ಬೋನಸ್ ಷೇರು ಸಿಗಲಿದೆ. ಒಂದು ವೇಳೆ ಹೂಡಿಕೆದಾರರು ಎಕ್ಸ್ ದಿನಾಂಕದಂದು ಅಥವಾ ಆನಂತರ ಷೇರು ಖರೀದಿಸಿದ್ರೆ ಬೋನಸ್ ಷೇರು ಪಡೆಯಲು ಅರ್ಹರಲ್ಲ.
ಶುಕ್ರವಾರ ಮೊನಾರ್ಕ್ ನೆಟ್‌ವರ್ತ್ ಕ್ಯಾಪಿಟಲ್ ಲಿಮಿಟೆಡ್ ಷೇರುಗಳು ಎನ್‌ಎಸ್‌ಇನಲ್ಲಿ ಶೇಕಡಾ 1.76% ಏರಿಕೆಗೊಂಡು 618 ರೂಪಾಯಿಗೆ ಮುಚ್ಚಿತ್ತು. ಮಾರುಕಟ್ಟೆ ಬಂಡವಾಳವು 2074 ಕೋಟಿ ರೂಪಾಯಿನಷ್ಟಿದೆ.
ಈ ಸ್ಟಾಕ್ 2024ರಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಕಳೆದ ಒಂದು ವರ್ಷದಲ್ಲಿ 90% ಗೂ ಅಧಿಕ ಹೆಚ್ಚಾಗಿದೆ.
ಶುಕ್ರವಾರ ಭರ್ಜರಿ ಜಿಗಿತ ಸಾಧಿಸಿದೆ ಮೊನಾರ್ಕ್ ನೆಟವರ್ತ್ ಕ್ಯಾಪಿಟಲ್
ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆ ಪಾಸಿಟಿವ್ ಆಗಿ ಕಾಣಿಸಿಕೊಂಡಿದ್ದು, ಮೊನಾರ್ಕ್ ನೆಟ್‌ವರ್ತ್ ಕ್ಯಾಪಿಟಲ್ ಷೇರು ಭಾರೀ ಜಿಗಿತ ಸಾಧಿಸಿದೆ. ಎನ್‌ಎಸ್‌ಇನಲ್ಲಿ ಕಂಪನಿ ಷೇರುಗಳು ಬೆಳಗ್ಗೆ 10 ಗಂಟೆಗೆ 36.15 ರೂಪಾಯಿ ಅಥವಾ 5.87% ಜಿಗಿತ ಸಾಧಿಸಿದ್ದು 650 ರೂಪಾಯಿ ತಲುಪಿದೆ.

